ಆಕಾಂಕ್ಷೆ

ಭಾವಗಳ ಶೋಧಿಸುವ ಭರದಲಿ
ಪೋಣಿಸುವ ಪದಗಳಿಗೆ ಪೈಪೋಟಿ
ಆಸೆಗಳ ನೀಗುವಾ ತುಡಿತದಿ
ಎಲ್ಲೆ ಮೀರಿದೆ ಮನದ ಹತೋಟಿ

ಶರಧಿಯ ಅಲೆಗಳು ಮನದ ದುಗುಡವೋ
ಉಕ್ಕಿ ಏರಿದೆ ಅವಳ ಮೋಹಕೆ
ಭಯದ ಛಾಯೆಯೋ ಬುದ್ದಿ ಬ್ರಮಣೆಯೋ
ಆ ಮೊಗದ ಚಂದಕೆ,ಆ ಕಿನ್ನರಿಯ ಹಂಬಲಕೆ

ದಕ್ಕಿತೆಂಬುದೊಂದು ಕನಸೋ ನನಸಾಗಿಸೋ ಮನಸೋ
ಆರ್ಥನಾದದಿ ಕೂಗುತಿದೆ ಆಸೆ ಎಂಬ ಮನದ ಹಕ್ಕಿ
ಮತ್ತೊಮ್ಮೆ ಬೆಳಗೋ, ಮತ್ತೊಮ್ಮೆ ಇರುಳೋ
ಮತ್ತೆ ಆಳ್ವಿಕೆಯೋ, ಗುಣದ ಪಾರುಪತ್ಯವೋ

ದಿಕ್ಕು ತಪ್ಪಿದ ನೌಕೆ ಎಂದು ಸೇರುವುದು ದಡವ
ಊರ ಅಲೆಯುವ ತಿರುಕ ಎಂದು ಕೂಡುವ ಗೃಹವ
ಸರ್ವಕ್ಕು ಉತ್ತರ ಮುಂಬರುವ ಕಾಲ
ಸರ್ವವೂ ಅದೀನ ಕಾಲದ ಮುಂಗಡ
ಸರ್ವವೂ ಅದೀನ ಕಾಲದ ಮುಂಗಡ

Comments

  1. ಚೆನಾಗಿದೆ ಗುರುಗಳೇ...ಹುಂ ಸರ್ವಕ್ಕೂ ಅದೀನ ಕಾಲದ ಮುಂಗಡ : :)

    ReplyDelete

Post a Comment

Popular posts from this blog

ಜೀವನ ಜಾತ್ರೆ

ನನ್ನ ಕಲ್ಪನೆ