ಮತ್ತೆ ಅವತರಿಸು

ಮತ್ತೆ ಅವತರಿಸು
ಓ ಎನ್ನ ತಾಯೇ, ಭಾರತಿಯೆ
ಮತ್ತೆ ಬಿತ್ತರಿಸು
ಆ ನಿನ್ನ ಛಾಯೆ,ಭಾರತಿಯೆ

ಜಗವೆಲ್ಲ ಬಯಸಿಹುದು ಶಾಂತಿಯಾ ಬಾಳ
ಪುರವೆಲ್ಲ ಸಿಲುಕಿಹುದು ಬ್ರಾಂತಿಯಾ ಗಾಳ
ನೀನ್ ಅವತರಿಸಿರ್ದೊಡೆ ಜಗಕೆಲ್ಲ ಬೆಳಗೊ
ನೀನ್ ವಿಹರಿಸಿರ್ದೊಡೆ ಜಗವೆಲ್ಲ ಬೆರಗೋ

ರುಂಡಮಾಲಿನಿ ಕಾಳಿಯಾಗೆನ್ನ ದೇಶದಲಿ
ರಕ್ಕಸರ ರುಂಡವಾ ಕೆಡುವುತಾ
ಉಕ್ಕೇರಿದ ಕ್ರೋದಾಗ್ನಿ ಜ್ವಲಿಸಲಿ
ಅಧರ್ಮಿಯರ ಹೃದಯವಾ ದಹಿಸುತ

ಯುಗ ಪರಿವರ್ತಿಸಲಿ ನಿನ್ನ ಇಚ್ಚಾನುಸಾರ
ಬ್ರಹ್ಮಾಂಡ ಜೈಂಕರಿಸಲಿ ಸನಾತನದ ಹುಂಕಾರ
ನಿನ್ನ ರೌದ್ರವತೆಗೆ ಸರ್ವವೂ ಸ್ವಾಹಾಕಾರ
ನಿನ್ನ ಅಪ್ಪಣೆಯೇ ಎಲ್ಲೆಲ್ಲು ಅಧಿಕಾರ

ಸಜ್ಜನರ ಮೊರೆಯಿನ್ನು ಆಲಿಸೆಯ ತಾಯೆ
ದುರ್ಜನರ ದುರ್ನಡತೆ ಕಾಣಿಸದೆ ಮಾಯೆ
ಇನ್ನೆಷ್ಟು ದಿವಸ, ತಮೋರಜದ ಅಜ್ಞಾತ
ಸಾಕಿನ್ನು ಅವತರಿಸು, ಮಾರಿಯಾ ಹಾಗೆ

ಬೇಡಿಕೆಯೊಂದೇ ನಿನ್ನ ಪಾದದಡಿಯಲಿ
ನವರಾಷ್ಟ್ರ ನಿರ್ಮಾಣ ಸನಾತನದ ನೆಲೆಯಡಿಯಲಿ
ಹಂಬಲವು ಒಂದೇ, ಜಗವೆಲ್ಲ ಬೆಳಗೊ ಜ್ಞಾನದಾ ಬೆಳಗು
ಹೊತ್ತಿ ಉದಯಿಸಲಿ ನಿನ್ನ ಗರ್ಭದಲಿ
ಹೊತ್ತಿ ಬೆಳಗಲಿ ನಿನ್ನ ಗರ್ಭದಲಿ

Comments

Popular posts from this blog

ಹಿಂದೂ ಧರ್ಮದ ದರ್ಶಿಕೆ "ಧರ್ಮ ಶ್ರೀ"

ಇದು ನನ್ನ ಜೀವನ

ಕನ್ನಡ ಮೀಡಿಯಮ್