ನೆಡೆಯುವಾಸೆಕಣೆ ಹುಡುಗಿ ನಿನ್ನ ಕಿರುಬೆರಳ ಕೊಂಡಿಯನೊಡಗೂಡಿ ಈ ಜಂಗುಳಿಯ ನಡುವೆ ಅಪರಿಚಿತರು ಇವರೆಲ್ಲ ಚಿರಪರಿಚಿತಳು ನೀನು ಕುರುಡು ಕಾಂಚಣದ ವ್ಯಾಪಾರಿಗಳ ನಡುವೆ ಕುರುಡು ಪ್ರೀತಿಯ ವ್ಯಾಪಾರಿ ನೀನು ಇಬ್ಬರೊಡಗೂಡಿ ಕಳೆದು ಹೋಗುವ ಈ ಜಾತ್ರೆಯೊಳು ಬೆರೆತು ಕರಗುವ ಈ ಸಂತೆಯೊಳು. ರಾಜವೀದಿಯೊಳು ಪ್ರೀತಿಯಾತೇರು ಎಳೆದುಸಾಗುವ ನಾವು ಹಗ್ಗ ಒಂದನು ಹಿಡಿದು ಪ್ರೀತಿ ಮರಳಿ ಗರ್ಭಗುಡಿ ಸೇರಲು ಮುಂದೆ ಸಾಗುವ ನಾವು ಕರ್ಮ ಬುತ್ತಿಯಹೊತ್ತು ನಿನ್ನ ದಾರಿಗೆ ನೀನು ನನ್ನ ದಾರಿಗೆ ನಾನು
ಜಗವೇ ನೀನು ಎಷ್ಟು ಏಕಾಂಗಿ ನನ್ನವಳಿಲ್ಲದೆ ಚಂದಿರನೆ ನೀನು ಎಷ್ಟು ಅಪೂರ್ಣ ನನ್ನವಳಿಲ್ಲದೆ ಶರಧಿಯೇ ನೀನು ಎಷ್ಟು ಚಂಚಲೆ ನನ್ನವಳಿಲ್ಲದೆ ಹಕ್ಕಿಗಳ ಇಂಚರವೇ ನೀನು ಎಷ್ಟು ಕಿರಿಕಿರಿ ನನ್ನವಳಿಲ್ಲದೆ ಗೆಳತಿ ನೀನಿಲ್ಲದೆ ಜಗದ ಕಡಲಲ್ಲಿ ಚಂದಿರ ಮುಳುಗುವ ಹೊತ್ತಿನ ಚಿಲಿಪಿಲಿಯೂ ಸಹ ನನ್ನ ಏಕಾಂತವನ್ನು ಪೂರೈಸಲಾಗದು ಗೆಳತಿ ಪೂರೈಸಲಾಗ ದು $ರಾಜ್&
kanasu sullu nenapu sullu brama matra satya
ReplyDelete