ಸ್ವಾಮಿ ವಿವೇಕಾನಂದರಿಗೊಂದು ಪತ್ರ

“ಯಾವ ನಾಡು ಕಲ್ಲು ಬಂಡೆಗಿಂತಲು ಹೆಚ್ಚಾಗಿ ತನ್ನ ತಳವನ್ನೂರಿದೆಯೋ,ಯಾವ ನಾಡು ತನ್ನ ಅತ್ಯಧ್ಬುತ ಶಕ್ತಿಯಿಂದ ಪ್ರಕಾಶಿಸುತ್ತಿದೆಯೋ.ಯಾವ ನಾಡಿನ ಜೀವ ಆದಿ ಅಂತ್ಯಗಳಿಲ್ಲದ ಪರಮಾತ್ಮನಿಗೆ ಸಮವಾಗಿದೆಯೋ ಆಂತ ನಾಡಿನ ಮಕ್ಕಳು ನಾವು,ಭಾರತದ ಮಕ್ಕಳು ನಾವು”.ಸ್ವಾಮೀಜಿ ನಿಜಕ್ಕೂ ನಿಮ್ಮ ಮಾತುಗಳು ಸತ್ಯ, ಭಗವಂತ ನಮಗೆ ಕೊಟ್ಟಂತಹ ಬಹು ದೊಡ್ಡ ಉಡುಗೊರೆ ನಮ್ಮನ್ನು ಭಾರತದಂತಹ ದೇಶದಲ್ಲಿ ಹುಟ್ಟಿಸಿದ್ದು.ಇಲ್ಲಿಯ ಸಂಸ್ಕೃತಿ,ಸಹಬಾಳ್ವೆ,ಋಷಿಗಳ ಮಾರ್ಗದರ್ಶನ,ಹಿರಿಯರ ಆರ್ಶೀವಾದ ಎಲ್ಲವೂ ನಮ್ಮ ಬಾಳ ಉದ್ದಕ್ಕೂ ದಾರಿದೀಪವಾಗಿದೆ.ಆದರೂ ಸ್ವಾಮೀಜಿ ಮತ್ತೊಮ್ಮೆ ನಿಮ್ಮ ಅಗತ್ಯ ಈ ಭಾರತಕ್ಕಿದೆ.
ಸ್ವಾಮೀಜಿ ನನ್ನ ದೇಶದಲ್ಲೀಗ ಬ್ರಷ್ಟಾಚಾರ ತಾಂಡವವಾಡುತ್ತಿದೆ,ಪಾಶ್ಚಾತ್ಯ ಸಂಸ್ಕೃತಿಗೆ ಜನರು ತಮ್ಮನ್ನು ತಾವು ಮಾರಿಕೊಳ್ಳುತ್ತಿದ್ದಾರೆ,ಬೇರೆಯವರ ತಲೆಒಡೆದು ಬದುಕುವುದನ್ನು ಜನರು ರೂಡಿಸಿಕೊಳ್ಳುತ್ತಿದ್ದಾರೆ,ಯುವ ಜನತೆ ದೇಶವನ್ನು ಕಟ್ಟುವ ಬದಲು ತಮ್ಮ ಜೀವನದ ಕಾಮನೆಗಳ ವ್ಯಸನಿಗಳಾಗುತ್ತಿದ್ದಾರೆ,ಬಿಡಿಗಾಸಿಗೋಸ್ಕರ ಆಳುವವರು ಅವರನ್ನು,ಅವರಿಗೆ ಆಶ್ರಯ ನೀಡಿದ ಅವರ ತಾಯಿ ಭಾರತಿಯನ್ನು ಮಾರಿಕೊಳ್ಳುತ್ತಿದ್ದಾರೆ,ನ್ಯಾಯ ಶಾಸ್ತ್ರವನ್ನೇ ರಚಿಸಿದ ನಾಡಿನಲ್ಲಿ ಸಾಮಾನ್ಯನ ನ್ಯಾಯದ ಹಂಬಲದ ಆಕ್ರಂದನ ಮುಗಿಲುಮುಟ್ಟುತ್ತಿದೆ,ನನ್ನ ಸೈನಿಕರನ್ನು ಗುಲಾಮರಂತೆ ನೋಡುತ್ತಿದ್ದಾರೆ,ನನ್ನ ಕನಸಿನ ಭಾರತ ಒಡೆದ ಕನ್ನಡಿಯಂತಾಗಿದೆ,ನನ್ನ ತಾಯಿ ಭಾರತಿ ಕಣ್ಣೀರಿಡುತ್ತಿದ್ದಾಳೆ. ಸ್ವಾಮೀಜಿ ನಿಮ್ಮ ಅವಶ್ಯಕತೆ ಈ ಭಾರತಕ್ಕಿದೆ.
“ಬೇಲಿಯೇ ಎದ್ದು ಹೊಲಮೆದ್ದರೆ ಮಾಡುವುದಾದರು ಏನು”.ಭಾರತ,ಹೆಸರಿಗೆ ಮಾತ್ರ ಪ್ರಜಾತಂತ್ರ ದೇಶ ಇಲ್ಲಿ ಈಗ ಆಳುವವನೇ ರಾಜ ಎನ್ನುವಂತಾಗಿದೆ. ಸಾಮಾನ್ಯ ಮನುಷ್ಯನ ಬಾಳು ದುಸ್ತರವಾಗುತ್ತಿದೆ.ಜನರ ಸೇವಕ ಎಂದು ಹೇಳಿಕ್ಕೊಳ್ಳುವವನು ಇಂದು ಜನರ ರಕ್ತವನ್ನು ಹೀರುವ ಕ್ರಿಮಿಯಾಗಿದ್ದಾನೆ. ರಾಜಕೀಯದಲ್ಲಿರುವ ನಾನು ದುಡ್ಡು ಮಾಡಬೇಕು ಎಂಬ ಮೋಹ ತುಂಬಿಕೊಂಡು ಅದಕ್ಕಾಗಿ ತನ್ನನ್ನೇ ಮಾರಿಕೊಳ್ಳುತ್ತಿದ್ದಾರೆ.ಯಾವ ದೇಶ,ಪರರ ಹಿತವನ್ನು ಬಯಸು ನಿನಗೆ ಒಳಿತಾಗುತ್ತದೆ ಎಂದು ಹೇಳುತ್ತದೆಯೋ ಆ ದೇಶದ ರಾಜಕಾರಣಿಗಳು ನಾನು,ನನ್ನದು,ನನ್ನವರು ಅವರುಗಳ ಉದ್ದಾರವನ್ನೇ ತನ್ನ ಮೂಲ ಗುರಿ ಎಂದು ಅದನ್ನು ಸಾದಿಸ ಹೊರಟ್ಟಿದ್ದಾರೆ.ಅಂದು “east india company” ಎಂಬ ಹೇಸರಿನಿಂದ ಬಂದು ದೇಶವನ್ನೆ ದಾಸ್ಯದಲ್ಲಿಟ್ಟವರು ಇಂದು ಈ ಹೊಲಸು ರಾಜಕಾರಣಿಗಳಿಂದ,ರಾಜಕೀಯದಿಂದ “MNC’’ ಎಂಬ ಇನ್ನೋಂದು ಮುಖವಾಡ ಹಾಕಿಕೊಂಡು ತೊಳಗಳಂತೆ ಒಳನುಸುಳುತ್ತಿದ್ದಾರೆ.ಈ ದೇಶದ ಸಂಸ್ಕೃತಿಯನ್ನೇ “Corporate culture” ಎ0ಬ ಸಂಸ್ಕೃತಿಯಿಂದ ಬದಲಾಯಿಸಿ ಭಾರತದ ಮೂಲಕ್ಕೇ ಧಕ್ಕೆತರುತ್ತಿದ್ದಾರೆ.
ಧಾರ್ಮಿಕತೆ,ಸನಾತನ ಹಿಂದೂ ಧರ್ಮ ನನ್ನ ದೇಶದ ಅಡಿಗಲ್ಲು ಎಂದು ನೀವು ಸಾರಿ ಸಾರಿ ಹೇಳಿದ್ದೀರಿ, ಆ ಧಾರ್ಮಿಕತೆ,ಸನಾತನ ಹಿಂದೂ ಧರ್ಮದ ಅರ್ಧವನ್ನೇ ಬದಲಾಯಿಸಲು ನನ್ನ ನಾಡಿನ ಜನರು ಹೊರಟ್ಟಿದ್ದಾರೆ. ಸಂನ್ಯಾಸಿ,ಯೋಗಿ ಎಂಬುದನ್ನು ಅದೆಷ್ಟೋ ಜನರು ಕಾಮಕ್ಕೆ,ದುಡ್ಡಿಗೆ ಉಪಯೋಗಿಸುತ್ತಿದ್ದಾರೆ. ಧರ್ಮಗಳು ಮನುಷ್ಯರನ್ನು ಹೆದರಿಸುವ ಅದರಿಂದ ದುಡ್ಡುಮಾಡುವ ದಾರಿ ಹಿಡಿಯುತ್ತಿವೆ. ಪ್ರತಿಯೊಬ್ಬ ಮನುಷ್ಯರಲ್ಲೂ ಇರುವ ದೇವರನ್ನು ಈಗಿನ ಜನ ಕೇವಲ ಗುಡಿ ಮಂದಿರಗಳಿಗೆ ಸೀಮಿತಗೊಳಿಸುತ್ತಿದ್ದಾರೆ.ಜನರ ಸೇವೆ ಮಾಡುವ ಬದಲಾಗಿ ದೇವರ ಸೇವೆಯ ಹೆಸರಲ್ಲಿ ದುಡ್ಡು,ಆಹಾರಗಳನ್ನು ಬೇಕಾ ಬಿಟ್ಟಿ ವ್ಯಯಿಸುತ್ತಿದ್ದಾರೆ. ಮನುಷ್ಯರು ಮನುಷ್ಯರನ್ನೇ ನಂಬಲಸಾದ್ಯವಾದ ಪರಿಸ್ದಿತಿ ನಿರ್ಣಾಮವಾಗಿದೆ.ದೇವರು ದುಡ್ಡಿಗೆ ಮಾತ್ರ ಎಂಬ ಮನೋಭಾವ ಜನರಲ್ಲಿದೆ.”ಸರ್ವ ದೇವ ನಮಸ್ಕಾರೋ ಕೇಶವಂ ಪ್ರತಿಗಚ್ಚತಿ” ಎಂಬ ವಾಕ್ಯವನ್ನು ತಿಳಿದುಕೊಳ್ಳದೆ ಬೇರೆ ಧರ್ಮದ ಅಳಿವಿಗಾಗಿ ಹವಣಿಸುತ್ತಿದ್ದಾರೆ.
ಈಗ ನನ್ನ ದೇಶದಲ್ಲಿ ಪಾಶ್ಚಾತ್ಯ ಜೀವನದ ಅನಾವರಣವಾಗುತ್ತಿದೆ.ಕೈಗಾರಿಕೆ,ರಾಜಕೀಯ,ಸಂಸ್ಕೃತಿ,ಜನರ ನಡವಳಿಕೆ,ಜನರ ನಡೆ ಎಲ್ಲವೂ ಪಾಶ್ಚಾತ್ಯತೆಯ ಗಿಡವನ್ನು ಮರವಾಗಿ ಬೆಳಸಲು ಹೊರಟಿವೆ.ಈ ತರಾತುರಿಯಲ್ಲಿ ಬಡವ ಬಡವನಾಗುತ್ತಿದ್ದಾನೆ ಶ್ರೀಮಂತ ಶ್ರೀಮಂತನೇ ಆಗುತ್ತಿದ್ದಾನೆ.ಯಾವ ಹಳ್ಳಿಗಳು ದೇಶದ ಆತ್ಮವಾಗಿದ್ದವೋ ಅದರ ಅವನತಿಯಾಗುತ್ತಿದೆ.ಕರ್ಮ ಭೂಮಿ,ನನ್ನ ದೇಶವೀಗ ಶ್ರೀಮಂತರ ಭೋಗ ಭೂಮಿಯಾಗುತ್ತಿದೆ ಇದರಲ್ಲಿ ಬಡವರು ಸಾಮಾನ್ಯ ಮನುಷ್ಯರು ಮೂಖ ಪ್ರೇಕ್ಷಕರಾಗಿದ್ದಾರೆ.ಸ್ವಾಮೀಜಿ ನನ್ನ ತಾಯಿ ಭಾರತಿಯನ್ನು ಕೈ ಹಿಡಿದೆತ್ತುವ ಕೆಲಸಕ್ಕಾದರು ನಿಮ್ಮ ಜನ್ಮ ಮತ್ತೊಮ್ಮೆ ಭಾರತಕ್ಕೆ ಅಗತ್ಯವಿದೆ.
ಇಷ್ಟೆಲ್ಲಾ ಆದರು ಸ್ವಾಮೀಜಿ ನೀವು ಯಾವ ಯುವಕರನ್ನು ಬೆಂಕಿಯ ಚೆಂಡೆಂದು ಕರೆಯುತ್ತಿದ್ದೀರೊ ಅವರುಗಳು ಸಿನಿಮಾ,ಪಬ್,ಡಿಸ್ಕೊ,ದುಷ್ಚಟಗಳ ಗುಲಾಮರಾಗುತ್ತಿದ್ದಾರೆ. ವಿದೇಶದಲ್ಲಿ ನೌಕರಿ ಮಾಡುವ ಉದ್ದೇಶ,ದುಡ್ಡು ಸಂಪಾದನೆ,ತಮ್ಮನ್ನು ತಾವು ಉದ್ದಾರ ಮಡಿಕೊಳ್ಳುವ ಯೋಚನೆಗಳಲ್ಲಿ ಮಗ್ನರಾಗಿದ್ದಾರೆ. ವಿದ್ಯೆಯಿಂದ ಬುದ್ದಿ ಬೆಳೆಯಬೇಕು ಇವೆರಡು ದೇಶಕ್ಕಾಗಿ ಮುಡಿಪಾಗಿಡಬೇಕು ಎನ್ನುವುದನ್ನು ಮರೆತು ನನ್ನ ಓದು ಕಂಪನಿ ಕೆಲಸಗಳಿಗೆ,ವಿದೇಶಿ ನೌಕರಿಗಳಿಗೆ,MNC ಗಳ ಸೇವೆಗಾಗಿಯೇ ಎಂದು ವಿದ್ಯೆ ಕೊಟ್ಟ ನಾಡಿಗೇ ಬೆನ್ನು ತೋರಿಸುವ ಕೆಲಸ ಈಗಿನ ಯುವಕರು ಮಾಡುತ್ತಿದ್ದಾರೆ.ಸ್ವಾಮೀಜಿ ಸ್ವಾತಂತ್ರ್ಯ ಬಂದ ನಂತರ ವಿಶ್ರಮಿಸಿದ ನನ್ನ ದೇಶದ ಯುವಕರು ಈಗಲೂ ಅದೇ ನಿದ್ದೆಯಲ್ಲಿಯೇ ಲೀನರಾಗಿದ್ದಾರೆ ಕಳ್ಳರು,ದರೋಡೆಕೋರರು ನನ್ನ ದೇಶವನ್ನು ಲೂಟಿ ಮಾಡುತ್ತಲೇ ಇದ್ದಾರೆ. ಹೊರಗಿನ ಕಳ್ಳರನ್ನು ಹೇಗೋ ತಡೆಯಬಹುದು ಒಳಗಿನ ಮೋಸಗಾರರನ್ನು ತಡೆಯುವುದೆಲ್ಲಿ. ಸ್ವಾಮೀಜಿ ಪಾಶ್ಚಾತ್ಯತೆಯ ಮತ್ತಿನಲ್ಲಿಯೇ ಇರುವ ನನ್ನ ದೇಶದ ಆಧಾರ ಸ್ತಂಭಗಳಾಗಿರುವ ಯುವಕರನ್ನು ಅವರೊಳ ಹೊಕ್ಕು ಅವರ ಕೆನ್ನೆಗೆರೆಡು ಬಾರಿಸಿ ಎಳಿಸಲಾದರೂ ನೀವು ಮತ್ತೊಮ್ಮೆ ಹುಟ್ಟಿಬರಬೇಕು ಸ್ವಾಮೀಜಿ ಹುಟ್ಟಿಬರಬೇಕು.
ನನ್ನ ದೇಶದ ಈ ಸ್ದಿತಿಯನ್ನು ಬದಲಾಯಿಸಿ ಮತ್ತೆ ಘತಕಾಲದ ವೈಭವವನ್ನು ಮರಳಿ ಭಾರತಕ್ಕೆ ನೀಡುವುದೇನಾದರು ಇದ್ದರೆ,ನನ್ನ ತಾಯಿ ಭಾರತಿ ಮತ್ತೆ ಜಗತ್ತಿನ ಹಲವು ದೇಶ ಭಾಷೆ ಸಂಸ್ಕೃತಿಯ ಶಿಖರದ ಸಿಂಹಾಸನವನ್ನೇನಾದರು ಏರುವುದೇ ಆದರೆ ಅದು ಈ ಪುಣ್ಯ ಭೂಮಿ,ಭಾರತದಲ್ಲಿ ನಿಮ್ಮ ಮರುಜನ್ಮದಿಂದ ಮಾತ್ರ ಸಾಧ್ಯ ಸ್ವಾಮೀಜಿ ಮಾತ್ರಸಾಧ್ಯ.

                                                                                               ಇಂತಿ ನಿಮ್ಮ ಅಭಿಲಾಷಿ


(ಗೆಳೆಯರೆ ಮೇಲೆ ಪ್ರತಿ ಸಾರಿ ನಾನು ಸ್ವಾಮೀಜಿ ನೀವು ಮತ್ತೆ ಹುಟ್ಟಿ ಬನ್ನಿ ಅಂತ ಹೇಳುತ್ತಲೇ ಬರುತ್ತಿದ್ದೇನೆ.ಅದರ ಅರ್ಧ ಈ ದೇಶದ ಪ್ರತಿಯೊಬ್ಬ ಯುವಕನಲ್ಲೂ ವಿವೇಕಾನಂದರ ಸಂದೇಶಗಳ ರಕ್ತ ಹರಿಯಬೇಕು ಅವರ ಕನಸುಗಳು ಯುವಕರ ಬುದ್ದಿಯಾಗಬೇಕು,ಅವರ ವಿಚಾರಧಾರೆಗಳು ಯುವಕರ ಶಕ್ತಿಯಾಗಬೇಕು,ಅವರ ಮುಂದಾಲೊಚನೆಗಳು ಯುವಕರ ಮಾರ್ಗಧರ್ಶನವಾಗಬೇಕು,ಅವರ ಆಸೆಗಳು ಯುವಕರ ಕೆಲಸಗಳಾಗಿ ರೂಪುಗೊಳ್ಳಬೇಕು ಆಗ ಮಾತ್ರ ಈ ದೇಶ ಜಗದ್ಗುರುವಾಗಲು ಸಾಧ್ಯ.ವಿವೇಕಾನಂದರು ಕೇವಲ ಒಬ್ಬ ಮನುಷ್ಯರಲ್ಲ ಅವರು ಈ ದೇಶದ ಒಟ್ಟು ಯುವಕರ ರೂಪ.
ವಿವೇಕಾನಂದರೇಂದರೆ ಈ ದೇಶ,ವಿವೇಕಾನಂದರೆಂದರೆ ಪ್ರತಿಯೊಬ್ಬ ಯುವಕನ ಅಂತರಾತ್ಮ.ಆದ್ದರಿಂದ ಪ್ರತಿಯೊಬ್ಬರೊಳಗಿರುವ ವಿವೇಕಾನಂದರನ್ನು ಜಾಗ್ರುತಗೊಳಿಸುವಲ್ಲಿ ನನ್ನದೊಂದು ಪುಟ್ಟ ಕೆಲಸ.)

Comments

 1. ಭಾರತದ ಬಗ್ಗೆ ಬೈಯ್ಯುವುದಕ್ಕೆ ಅಷ್ಟೇ ಈ ಲೇಖನ ಸೀಮಿತವಾಗಿದೆ ಎಂದು ನನಗನಿಸುತ್ತಿದೆ ..ಆದರೆ ವಸ್ತು ಸ್ಥಿತಿಯನ್ನು ವರ್ಣಿಸಿ,ಅದಕ್ಕೆ ಪರಿಹಾರಗಳನ್ನು ಸೂಚಿಸಿ,ಆ ಮಾರ್ಗದಲ್ಲಿ ನಡೆಯಿರಿ ಎಂದು ಹೇಳಿದ್ದಿದ್ದರೆ ಈ ಬರಹ ಇನ್ನಷ್ಟು ಸಾರ್ಥಕವಾಗಬಹುದಿತ್ತೇನೋ....
  ಏಕೆಂದರೆ ನನಗೆ ತಿಳಿದ ಮಟ್ಟಿಗೆ ಆಗಿನ ಕಾಲದಲ್ಲೂ ಭಾರತದ ಸ್ಥಿತಿ ಕಷ್ಟದಲ್ಲೇ ಇತ್ತು,ಹಲವಾರು ಸಮಸ್ಯೆಗಳಿದ್ದವು,ಆದರೆ ಅವರು ಅವುಗಳ ಬಗ್ಗೆ ಜಾಸ್ತಿ ವಿವರಿಸಿದೇ ನಮ್ಮ ವಿಶೇಷತೆಗಳ ಬಗ್ಗೆ ಹೇಳಿದರು,ಆ ಮೂಲಕ ನಮ್ಮಲ್ಲಿ ಹೊಸ ಚೈತನ್ಯ ತುಂಬಿದರು...ಯುವಕರಿಗೊಂದು ಹೊಸ ಮಾರ್ಗ ತೋರಿಸಿದರು...
  ನನಗೆ ವೈಯಕ್ತಿಕವಾಗಿ, ಈ ಲೇಖನವನ್ನು ಓದಿದಾಗ ಸ್ಪೂರ್ತಿ ಬರುವಂತಹ ಯಾವುದೇ ಅಂಶಗಳು ಕಾಣುತ್ತಿಲ್ಲ...ಆ ತರಹದ ಅಂಶಗಳನ್ನು ಹೇಳಿದ್ದರೆ ಇನ್ನಷ್ಟು ಪರಿಣಾಮಕಾರಿಯಾದೀತೇನೋ.....
  ಇರಲಿ ದೇಶದ ಬಗೆಗಿನ ನಿಮ್ಮ ಅಭಿಮಾನಕ್ಕೊಂದು ಸಲಾಂ...
  ಹಸನಾದ ಹೊಸ ಭಾರತವನ್ನು ಕಟ್ಟುವ,ಕಾಣುವ ಹಂಬಲ ಯಶಸ್ವಿಯಾಗಲಿ...
  ನಮಸ್ತೆ..

  ReplyDelete
 2. ನಿಮ್ಮ feedbak ಗೆ ಧನ್ಯವಾದಗಳು.
  1.ಮೊದಲು ಮಲಗಿರುವವರು ಏಳಲಿ ಚಿನ್ಮಯ್ ಆಮೇಲೆ ಪರಿಹಾರಗಳು,ನಾವು ಹೋಗಬೇಕಾದ ದಾರಿಗಳನ್ನು ನಾವು ಹೇಳಿದ್ದರೆ ಆಗ ಅದಕ್ಕೊಂದು ಅರ್ಧವಿರುತ್ತದೆ.ಅದನ್ನು ಬಿಟ್ಟು ತಮ್ಮದೇ ಆದ ಗುಂಗಿನಲ್ಲಿರುವವರಿಗೆ ಆಧ್ಯಾತ್ಮದಲ್ಲಿ ಹೀಗಿದೆ,ನೀನು ಏ ಧರ ಮಾಡಬೇಕು ಅಂದರೆ ಯಾರೂ ಕೇಳಲು ಸಿದ್ದವಾಗಿರುವುದಿಲ್ಲ ಅಲ್ವ.ಆಗ ನೀವು ಹೇಳಿದ ಬಹು ದೊಡ್ಡ ಪರಿಹಾರವೇ ಆಗಿರಲಿ ಅದೂ ಕೂಡ ನೀರಿನಲ್ಲಿ ಹೋಮಮಾಡಿದಂತೆ ಆಗುವುದಿಲ್ಲವೇ?
  2.ವಿವೇಕಾನಂದರು ವಿದೇಶಗಳಲ್ಲಿ ಆಧ್ಯಾತ್ಮ,ಜೀವನ ರೂಪಿಸುವ ಬಗೆಗಳನ್ನು ಹೇಳುತ್ತಿದ್ದರು ಆದರೆ ಭಾರತದಲ್ಲಿ ಅವರು ಭಾರತವನ್ನು ಹೋಗಳುವುದನ್ನು ಬಿಟ್ಟು ಭಾರತದ ಜನರನ್ನು ಆಗಾಗಲೇ ನಿದ್ರೆಯಲ್ಲಿದ್ದವರನ್ನು ಅವರ ಪ್ರಕರ ಮಾತುಗಳಿಂದ ಏಳಿಸುವ ಕಾರ್ಯದಲ್ಲಿದ್ದರೆ ಹೊರತು ಅಧ್ಯಾತ್ಮ,ಜೀವನಗಳ ಪ್ರವಚನ ಮಾಡಿದ್ದು ಕಡಿಮೆ.ಇದನ್ನು ನೀವು "ವಿಶ್ವ ಮಾನವ ವಿವೇಕಾನಂದ ಸಂಪುಟ 3"ಅಲ್ಲಿ ಓದಬಹುದು.ಆದ್ದರಿಂದ ಈಗ ಭಾರತದ ಯುವಕರಿಗೆ ಅವರ ಭಾರತ ಯಾವ ಸ್ಧಿತಿಯಲ್ಲಿದೆ ಎಂಬ ಅರಿವು ಬೇಕು ನಂತರ ಅದನ್ನು ಸರಿ ಮಾಡುವ ವಿದಾನಗಳು.ಈ ನಿಟ್ಟಿನ್ನಲ್ಲಿ ಭಾರತದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ ಯುವಕರನ್ನು ಎಬ್ಬಿಸುವ ಚಿಕ್ಕ ಕೆಲಸ ಅಷ್ಟೇ ಸ್ವಾಮಿ ಇದು. ಒಬ್ಬ ಮನುಷ್ಯ ಎನ್ನಾದರು ಮಾಡಬೇಕು ಎಂದು ದೃಡ ನಿರ್ದಾರ ತೆಗೆದುಕೊಳ್ಳುವುದು ಒಂದಾ ಬುಡಕ್ಕೆ ಬೆಂಕಿ ಬಿದ್ದಾಗ ಇನ್ನೋಂದು ಪೂರ್ತಿ ಸೋತಾಗ.ಆದ್ದರಿಂದ ಕಳೆದುಕೊಳ್ಳುವ ಮೊದಲೇ ಎಚ್ಚರಿಸುವಲ್ಲಿ ಇದೊಂದು ಪುಟ್ಟ ಕೆಲಸ ಅಷ್ಟೆ.
  3.ಇನ್ನು ನಿಮ್ಮ ವೈಯಕ್ತಿಕತೆಯ ಬಗ್ಗೆ ಮಾತಾಡುವ ಹಕ್ಕು ನಮಗಿಲ್ಲ :) :) :) :)
  4.ಚಿನ್ಮಯ್ ನನ್ನ ಪ್ರಕಾರ ಸ್ವಾಮಿ ವಿವೇಕಾನಂದರು ಹೇಳಿರುವ ಮಾರ್ಗದಲ್ಲಿ ಹೋದರೆ ಕಂಡಿತವಾಗಿಯು ಭಾರತಕ್ಕೆ ಮತ್ತದೇ ಘತಕಾಲದ ವೈಭವ ಮರಳುತ್ತದೆ.ಆದರೆ ಅದನ್ನು ಒದುವುದಾದರು ಏಕೆ ಎಂದು ಕೇಳಬಹುದು ಅದಕ್ಕೆ ಉತ್ತರ ಕೊಡುವುದರಲ್ಲಿ ನನ್ನದೊಂದು ಪುಟ್ಟ ಹೆಜ್ಜೆ ಇದು ಅಷ್ಟೆ.ನಾನು ಮೊದಲೇ ಹೇಳಿದ ಹಾಗೆ ವಿವೇಕಾನಂದರೆಂದರೆ ಒಟ್ಟು ಯುವಕರ ರೂಪ ಆತ ಮಾತ್ರ ಪರಿಹಾರ ಸೂಚಿಸಬಹುದೆಂದರೆ ಆ ಒಟ್ಟು ಯುವಕರ ಸಮೂಹ ಮಾತ್ರ ಪರಿಹಾರ ಸೂಚಿಸಿ ಆ ಮಾರ್ಗದಲ್ಲಿ ನಿಡೆದಾಗ ಭಾರತ ಉಳಿಯುತ್ತದೆ.ಸೋ ನಾನೊಬ್ಬನ ಪರಿಹಾರ ನನಗೆ ಮಾತ್ರ ಸರಿಯಾಗಬಹುದು.ಸೋ ನನ್ನ ದೇಶ ಭಾರತ ಈ ಸ್ಧಿತಿಯಲ್ಲಿದೆಯಲ್ಲಾ ನಾನು ಏನಾದರು ಮಾಡಬೇಕು ಎಂದುಕೊಂಡು ಯುವಕರು ಅವರ ಕಲ್ಪನಾ ಲೋಕವನ್ನು ಬಿಟ್ಟು ಭಾರತದ ನಿಜ ಸ್ಧಿತಿಯನ್ನಿರಿಯುವ ಕೆಲಸ ಮಾಡುಲು ಅವರನ್ನು ಪ್ರೇರೇಪಿಸುವಲ್ಲಿ ನನ್ನದೊಂದು ಪುಟ್ಟ ಕೆಲಸ.

  ReplyDelete

Post a Comment

Popular posts from this blog

ಕನ್ನಡ ಮೀಡಿಯಮ್

ಹಿಂದೂ ಧರ್ಮದ ದರ್ಶಿಕೆ "ಧರ್ಮ ಶ್ರೀ"

ಇದು ನನ್ನ ಜೀವನ