ಮೂರ್ತಿಯಲ್ಲಿದ್ದಾನಾ ಭಗವಂತ


ಒಬ್ಬ ಹಿಂದು,ಹಬ್ಬದ ಬೆಳಿಗ್ಗೆ ಎದ್ದು ಸ್ನಾನ ಮುಗಿಸಿ ಹೊಸ ಬಟ್ಟೆ ತೊಟ್ಟು ದೇವಸ್ತಾನಕ್ಕೆ ಹೊಗುತ್ತಾನೆ. ಹಿಂದುವಿನ ಮನೆಯ ಒಂದು ಸಣ್ಣ ಕೊಣೆಯಲ್ಲಿ ಒಂದಷ್ಟು ದೇವರ ಮೂರ್ತಿಗಳನ್ನಿರಿಸಿ ಅದಕ್ಕೆ ಕೈ ಮುಗಿಯುತ್ತಾರೆ. ಗೌರೀ ಗಣೇಶ ಹಬ್ಬದಂದು ಬೀದಿ ಬೀದಿಗಳಲ್ಲಿ ಗೌರೀಗಣೇಶರ ವಿಗ್ರಹಗಳನ್ನಿರಿಸಿ ಪೂಜಿಸುತ್ತಾರೆ.ಪ್ರತಿಯೊಬ್ಬರ ಭಾವನೆ ದೇವರು ಆ ವಿಗ್ರಹದಲ್ಲಿದ್ದಾನೆ ಎಂಬುದೆ.ಗರ್ಭಗುಡಿಯ ಸರಳಿನ ಹಿಂದೆ ದೇವರನ್ನಿರಿಸಿ ಪೂಜಾರಿಯನ್ನು ಕಾವಲಿಗಿರಿಸಿ ದೇವರನ್ನು ಒಂದು ಕೋಣೆಗೆ ಸೀಮೆತಗೊಳಿಸಿದೆಯೆ ಹಿಂದೂ ಧರ್ಮ.
                   ಖಂಡಿತ ಇಲ್ಲಾ. ಹಿಂದು ಧರ್ಮದಲ್ಲಿ ವೇದೋಪನಿಷದ್ಗಳು ಹೇಳಿದ ಪ್ರತಿಯೊಂದು ಆಚರಣೆಗೂ ಒಂದು ಅರ್ಥವಿದೆ.ಹಾಗೆಯೇ ಈ ಮೂರ್ತಿ ಪೂಜೆಯು ಸಹ. ಮನುಷ್ಯ ಯಾವುದಾದರೊಂದನ್ನು ಗುರುತಿಸಬೇಕಾದರೆ ಆ ವಸ್ತುವಿನ ಪೂರ್ಣ ಚಿತ್ರಣ ಆತನ ಮನಸ್ಸಿನಲ್ಲಿ ಮೂಡಬೇಕು.ಒಮ್ಮೆ ಮೂಡಿದರೆ ಆ ವಸ್ತುವನ್ನು ಕತ್ತಲಲ್ಲೂ ಆತ ಗುರುತಿಸಬಲ್ಲನು.ಆ ನಿಟ್ಟಿನಲ್ಲಿ ಸಗುಣೋಪಾಸನೆ ನಿರಾಕಾರ ತತ್ವದರ್ಶನದೆಡೆಗೆ ಹೋಗುವ ದಾರಿಯಾಗಿದೆ.
                   ಹಿಂದೂ ಧರ್ಮದಲ್ಲಿ ಮುನ್ನೂರಮುವತ್ತು ಕೋಟಿ ದೇವತೆಗಳಿದ್ದಾರೆ ಎಂಬುದನ್ನು ನಾವುಗಳು ಚಿಕ್ಕ ವಯಸ್ಸಿನಿಂದಲೂ ಕೇಳಿಕೊಂಡು ಬಂದಿದ್ದೇವೆ. ಅರ್ಥಾತ್ ಈ ಜಗತ್ತಿನ್ನಲ್ಲಿ ಪ್ರತಿಯೊಬ್ಬ ಮನುಷ್ಯನ ಚಿಂತನೆಗಳು ಬೇರೆ ಬೇರೆಯಾಗಿದೆ,ಆದ್ದರಿಂದ ಪ್ರತಿಯೊಬ್ಬ ಮನುಷ್ಯನು ಆತನ ಭಾವನಾನುಸಾರವಾಗಿ ಯಾವ ದೇವರನ್ನುಬೇಕಾದರು ಪೂಜಿಸಿ ಆತ್ಮ ಸಾಕ್ಷಾತ್ಕಾರವನ್ನು ಹೊಂದಬಹುದು ಎಂಬುದನ್ನ ಹಿಂದೂ ಧರ್ಮ ಜಗತ್ತಿಗೇ ಸಾರುತ್ತಿದೆ. ವಿವಿಧತೆಯಲ್ಲಿ ಎಕತೆಯನ್ನು ಕಾಣುವ ಧರ್ಮ ಹಿಂದೂ ಧರ್ಮ.
                   ಹಿಂದುಗಳ ಮೂರ್ತಿ ಪೂಜೆಯನ್ನು ಮೊದಲಿನಿಂದಲೂ ವಿರೋಧಿಸುತ್ತಾಬಂದಿರುವ ಮುಸ್ಲಿಂ,ಕ್ರಿಶ್ಚಿಯನ್ ಧರ್ಮಗಳ ವಾದದಲ್ಲಿ ದ್ವಂದ್ವವಿದೆ. ಎಂದರೆ ಮೂರ್ತಿಪೂಜೆ ಸರಿಯಿಲ್ಲ ಎಂಬುದಾದರೆ ಮುಸಲ್ಮಾನು ಮಸೀದಿಯಲ್ಲಿಯೇ ಹೋಗಿ ನಮಾಜ್ ಮಾಡುವುದಾದರು ಏಕೆ?ಅವರುಗಳು ಕಾಬಾವನ್ನು ಪವಿತ್ರತೆಯ ಸಂಕೇತವಾಗಿ ಪೂಜಿಸುವುದಾದರು ಏಕೆ?ಕ್ರಿಶ್ಚಿಯನ್ನರು ಶಿಲುಬೆಯನ್ನ ಧರಿಸುವುದಾದರು ಏಕೆ? ಚರ್ಚಿನಲ್ಲಿ ಏಸುವಿನ ಮುಂದೆ ಮೇಣದ ಬತ್ತಿಗಳನ್ನ ಹಚ್ಚುವುದಾದರು ಏಕೆ?. ಇವೆಲ್ಲವನ್ನೂ ಪರಿಶೀಲಿಸಿದರೆ ಇವೆಲ್ಲವೂ ಮೂರ್ತಿಪೂಜೆಯ ವಿವಿದ ರೂಪಗಳಲ್ಲವೇ? ಒಬ್ಬ ಮನುಷ್ಯ ಯಾವುದೇ ಧರ್ಮದವನಾಗಿರಲಿ ಆತ ನಿರಾಕಾರ ತತ್ವವಾದ ಆ ಭಗವಂತನನ್ನು ಅರಿಯಬೇಕಾದರೆ ಆತನಿಗೆ ಒಂದು ಆಕಾರದ ಸಹಾಯ ಅತ್ಯಗತ್ಯ,ಇದನ್ನು ಪ್ರತಿಯೊಂದು ಧರ್ಮವೂ ಒಪ್ಪಿಕೊಂಡೇ ಒಂದಲ್ಲಾ ಒಂದುರೀತಿಯಲ್ಲಿ ಮೂರ್ತಿಪೂಜೆಯನ್ನು ಅನುಸರಿಸುತ್ತಿದೆ.ಮೂರ್ತದಿಂದ ಅಮೂರ್ತದೆಡೆಗೆ ಹೋಗುವಲ್ಲಿ ಮೂರ್ತಿಪೂಜೆ ತುಂಬಾ ಸಹಕಾರಿಯಾಗಿದೆ.


                   ಹಾಗಾದರೆ ಮೂರ್ತಿಯೊಳಗೇ ಅಡಗಿಕುಳಿತ್ತಿದ್ದಾನ ಭಗವಂತ?ಖಂಡಿತಾ ಇಲ್ಲ ಆತ ನಮ್ಮೊಳಗೇ ಅಡಗಿಕೂತಿದ್ದಾನೆ.ಪ್ರತಿಯೊಬ್ಬ ಮನುಷ್ಯನಲ್ಲೂ ಆತ ಇದ್ದಾನೆ,ಪ್ರತಿಯೊಂದು ಜೀವಿಯಲ್ಲೂ ಆತನಿದ್ದಾನೆ.ಆದ್ದರಿಂದಲೇ ಸ್ವಾಮಿ ವಿವೇಕಾನಂದರು ಹೇಳಿದ್ದು “’ದೇವರನ್ನು ವಿಗ್ರಹಗಳ ಆಚೆಗೆ ನೋಡಿ”ಎಂದು. ಹೌದು ವಿಗ್ರಹಗಳು ಕೇವಲ ನಮ್ಮ ಮನಸ್ಸಿನಲ್ಲಿ ಒಂದು ಆಕಾರವನ್ನು ಮೂಡಿಸಬಹುದು ಆದರೆ ಆತ್ಮಸಾಕ್ಷಾತ್ಕಾರವಾಗದು. ಮೂರ್ತಿಯಲ್ಲಿ ದೇವರನ್ನು ಪೂಜಿಸುವ ಮೊದಲು ಪ್ರತಿಯೊಬ್ಬನಲ್ಲೂ ಇರುವ ದೇವರನ್ನು ಪೂಜಿಸಬೇಕು.ದೇಶದ,ಸಮಾಜದ ಒಳಿತಿಗಾಗಿ ಮಾಡಿದ ಕರ್ಮ ಪುಷ್ಪಗಳಿಂದ ಆ ಭಗವಂತನ್ನು ಅರ್ಚಿಸಬೇಕು.ಕರುಣೆ ವಾತ್ಸಲ್ಯಗಳಿಂದ ಬಡ ಬಗ್ಗರ ಸೇವೆಮಾಡಿದ ಬೆವರಿನಿಂದ ಆ ದೇವರಿಗೆ ಅಭಿಷೇಕ ಮಾಡಬೇಕು.ತಂದೆ,ತಾಯಿ,ಬಂದುಬಳಗ ನೆರೆಹೊರೆ ಎಲ್ಲರನ್ನೂ ಪ್ರೀತಿಸಬೇಕು ಆಗ ಮಾಡಿದ ಪೂಜೆಗೆ ಮಹತ್ವವಿದ್ದು ಅದರಿಂದ ಪೂರ್ಣಜ್ನಾನ ಲಭಿಸಿ ಆತ್ಮಸಾಕ್ಷಾತ್ಕಾರವಾಗುವುದು.
                   ಶ್ರೀ ಶಂಕರಾರ್ಚಾಯರು ಹೇಳುತ್ತಾರೆ “’ಮೂರ್ತಿ ಪೂಜೆ ಏನುತಿಳಿಯದವನಿಗೆ ನಿರಾಕಾರ ಪೂಜೆ ಸರ್ವವನ್ನೂ ತಿಳಿದವನಿಗೆ”’ ಎಂದು.ವೇದಗಳೂ ಸಹ ಸಾರಿ ಸಾರಿ ಹೇಳುತ್ತವೆ ಮೂರ್ತಿ ಪೂಜೆ ಕೆಳಮಟ್ಟದ್ದು ಎಂದು.ಆದರೆ ಒಬ್ಬ ಹುಡುಗ ಪದವಿಯನ್ನು ಪಡೆಯಲು ಆತನ ಪದವಿ ತರಗತಿಗಳು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಆತನ ಒಂದನೇ ತರಗತಿಯೂ ಸಹ ಅಲ್ಲವೇ? ಪದವಿಯನ್ನು ಪಡೆದೊಡನೆ ಆತ ಒಂದನೇ ತರಗತಿ ಸರಿ ಇಲ್ಲ ಅದರಿಂದ ಏನೂ ಉಪಯೋಗವಿಲ್ಲ ಎಂದರೆ ಸರಿಯೇ?ಇಲ್ಲ ಆ ಹುಡುಗನಿಗೆ ಪದವಿ ಪಡೆಯಲು ಪದವಿ ತರಗತಿಗಳಷ್ಟೇ ಮುಖ್ಯವಾದುದು ಆತನ ಒಂದನೇ ತರಗತಿ. ಹಾಗೆಯೇ ನಿರಾಕಾರ ಚಿಂತನೆಯು ಎಷ್ಟು ಮುಖ್ಯವೊ ಅಷ್ಟೇ ಮುಖ್ಯ ಈ ಮೂರ್ತಿಪೂಜೆ.
                   ಈ ಲೇಖನ ಕೇವಲ ನಿಮ್ಮಲ್ಲಿ ಹಿಂದೂ ಧರ್ಮದ ಆಚರಣೆಗಳು ನಮ್ಮ ಜೀವನದಲ್ಲಿ ಎಷ್ಟು ಮಹತ್ವವನ್ನು ಹೊಂದಿದೆ ಎಂಬ ಚಿಂತನೆಯನ್ನು ಮೂಡಿಸುವಲ್ಲಿ ಒಂದು ಸಣ್ಣ ಪ್ರಯತ್ನವಷ್ಟೇ.ಹಿಂದೂ ಧರ್ಮ ವಿಶಾಲವಾಗಿದೆ ಅದರ ವಿಶಾಲತೆ ಸಾಗರಕ್ಕಿಂತ ದೊಡ್ಡದಾಗಿದೆ ಆ ಹಿಂದೂ ಧರ್ಮದ ಸುಧೆಯನ್ನು ಸವಿಯಲು ಅದರ ಅಧ್ಯಯನ ಅದರ ಬಗೆಗಿನ ಚಿಂತನೆ ಅತ್ಯಗತ್ಯ.ಆ ಎಷ್ಟೋ ಚಿಂತನೆಗಳ ರಾಶಿಯಲ್ಲಿ ಇದೊಂದು ಚಿಕ್ಕದಾದ ಚಿಂತನೆ.ಮೂರ್ತಿಪೂಜೆಯ ಬಗೆಗಿನ ಒಂದು ಸಣ್ಣದಾದ ಚಿಂತನೆಯನ್ನು ಈ ಲೇಖನದಲ್ಲಿ ನಿರೂಪಿಸಿದ್ದೇನೆ.
ಜೈ ಹಿಂದ್

Comments

  1. ಹಿಂದು ಧರ್ಮದ ನಂಬಿಕೆಗಳಲ್ಲಿ ಹುಳುಕು ಹುಡುಕುವುದೇ ವೈಚಾರಿಕತೆ ಎಂದು ನಮ್ಮ ಬುದ್ಧಿ(?)ಜೀವಿಗಳು ಭಾವಿಸಿದಂತಿದೆ. ಇತರ ಧರ್ಮಗಳಲ್ಲಿ ಕೂಡ ಎಷ್ಟೋ ಮೂಢನಂಬಿಕೆಗಳಿವೆ, ಅವುಗಳ ಬಗ್ಗೆ ಉಸಿರೆತ್ತುವುದಿಲ್ಲ. ಹಿಂದುಗಳ ಆಚಾರ ವಿಚಾರಗಳಲ್ಲಿ ನೂರೆಂಟು ತಪ್ಪು ಹುಡುಕುತ್ತಾರೆ. ಮೂರ್ತಿ ಪೂಜೆಯ ಬಗ್ಗೆ ಉತ್ತಮ ಲೇಖನ ಬರೆದಿದ್ದೀರಿ

    ReplyDelete
  2. ಧನ್ಯವಾದಗಳು ದೀಪಸ್ಮಿತಾ ಅವರೆ.
    ಮೂರ್ತಿಯಲ್ಲಿ ದೆವರರನ್ನ ಕಾಣುತ್ತಾ ಕಾಣುತ್ತಾ ಮನಃ ಪರಿಶುದ್ದತೆ ಪಡೆದು ಅದರಿಂದ ನಿರಾಕಾರ ತತ್ವವನ್ನು ಸೇರುವ ಮಾರ್ಗ ಇದು.ನಮ್ಮ ಬುದ್ದಿಜೀವಿಗಳಿಗೆ ಬುದ್ದಿ ಜಾಸ್ತಿಯಾಗಿ ಹಂಗೆ ಆಡ್ತಾರೆ ಅಷ್ಟೆ.ಮತ್ತೆ ಮತ್ತೆ ಬ್ಲಾಗ್ ಗೆ ಬರುತ್ತಿರಿ.

    ReplyDelete
  3. ಲೇಖನದ ವಿಷಯದ ಬಗ್ಗೆ ಮಾತನಾಡುವಷ್ಟು ವಿಷಯ ತಿಳುವಳಿಕೆ ನನ್ನಲ್ಲಿಲ್ಲ..
    ಬರೆದ ರೀತಿ ನನಗೆ ಕೆಲವೆಡೆ ಸ್ವಲ್ಪ ಕಠಿಣವಾಗಿ ತೋರಿತು..
    ಅದರಲ್ಲೂ ವಿಶೇಷವಾಗಿ ಮುಸ್ಲಿಂ ಹಾಗೂ ಕ್ರಿಶ್ವಿಯನ್ ಧರ್ಮಗಳ ಬಗ್ಗೆ ಹೇಳುವಾಗ..ಶಿಲುಬೆ ಅದು ಇದು ಅಂತ...ಅದು ನನ್ನ ವೈಯಕ್ತಿಕ ಅಭಿಪ್ರಾಯವಷ್ಟೇ...ಜೊತೆಗೆ ಎಂದಿನಂತೆ ಕೆಲವು ಬೆರಳಚ್ಚು ದೋಷಗಳು...ಬರವಣಿಗೆಯ ಶೈಲಿಯಲ್ಲಿ ಗಮನಾರ್ಹ ಬದಲಾವಣೆ ಕಾಣುತ್ತದೆ...ನೋಡಿ ಖುಷಿಯಾಯ್ತು...ಬರೆಯುತ್ತಿರಿ ಓದುವುದೊಂದೇ ನಮ್ಮ ಕೆಲಸ..ಶುಭಮಸ್ತು

    ReplyDelete
  4. ha ha nanna tappugalanna heliddakke danyavadagalu nanna mundina lekanadalli adanna sari madikolloke prayathnisithini thank u very much

    ReplyDelete

Post a Comment

Popular posts from this blog

ಜೀವನ ಜಾತ್ರೆ

ನನ್ನ ಕಲ್ಪನೆ