ಉದಯಿಸುವನಾ ಸೂರ್ಯ



ಜಾರಿಹನು ದಿನಕರ ದಿನಗೂಲಿ ಮುಗಿಸಿ
ಮತ್ತೊಂದು ಉದಯಕ್ಕೆ ನಾಂದಿಯನು ಹಾಡುತ
ಚೆಲ್ಲಿಹುದು ಕೆಂಪು ಪ್ರಕೃತಿಯ ಮಾಯೆಗೆ
ಬಳಿದಿಹುದು ಮಾಯೆ ನಮ್ಮ ಈ ಕಣ್ಣಿಗೆ

ಅದೆಂತಹ ಅಧ್ಬುತವೊ ಆ ಸೂರ್ಯಾಸ್ತಮವೊ
ಅದೆಂತಹ ಆಶ್ಚರ್ಯವೊ ನಮ್ಮೊಳಗಿನ ತಮವೊ
ತಮದೊಳು ಹೆದರಿ ಗೂಡ ಸೇರಿದವು ಪಶುಜಂತುಗಳು
ಒಳಗತ್ತಲೆಗೆ ಬೆದರಿ ಮೂಲೆ ಹೊಕ್ಕವು ಸದ್ಬಾವನೆಗಳು

ತಮೋರಕ್ಕಸ ಎದ್ದಿಹನು ಜಗದಲಿ
ಜಗವೆಲ್ಲ ಕಬಳಿಸುವ ಆ ಹುಚ್ಚು ಛಲದಲಿ
ಮನದೊಳಗೆ ಬೆಳದಿಹನು ಶಡ್ಗುಣಗಳ ರಕ್ಕಸ
ನನ್ನನ್ನೆ ಮುಗಿಸುವ ಆ ನೂರು ಯೋಜನೆಯಲಿ

ಕತ್ತಲಾವರಿಸುವುದೋ ಜಗದಲಿ
ಭಯದ ಜನನವೊ ನಮ್ಮ ಈ ಮನದಲಿ
ಕಣ್ಗೆಟ್ಟಿಹವು ಜಗದ ಮಕ್ಕಳು
ಕಾಣದಾಗಿದೆ ದಾರಿ ನೆಡೆಯುವ ಪಥದಲಿ

ಉದಯವಾಗುವುದೊ ಆ ಪ್ರಕರ ಬೆಳಕು
ಸರ್ವೊದಯವಾಗುವುದೊ ಎಲ್ಲರಾ ಬದುಕು
ದಾರಿ ಸವೆಯುವುದು ಆ ಸನಾತನ ನೆಡೆಯಲಿ
ದಾರಿ ತಿಳಿಯಾಗುವುದು ಬೆಳಕಿನ ದರ್ಶನದಿ


ನಂಬು ನೀ ಬೆಳಕ ತಮವು ಅಡಗುವುದು
ತಿಳಿ ನೀ ಭಾರತವ ಒಳಗತ್ತಲೆಯ ಬೆಳಗಿಸಲು
ದೇಶವಲ್ಲವೋ ಇದು ತಾಯಿನಾಡು
ಎಲ್ಲರನು ಸಲಹುವ ಆ ಚೈತನ್ಯದ ಬೀಡು

ನಮ್ಮೊಳಗೆ ಉದಯಿಸುವನಾ ಜ್ಞಾನ ಸೂರ್ಯ
ನಮ್ಮೊಳಗೆ ಅಸ್ತಮಿಸುವುದಾಜ್ಞಾನದ ಭಯ
ನಮ್ಮೊಳಗಿನ ಬೆಳಕೋ ಬೆಳಗುವುದು ಜಗವ
ದಾರಿ ತೋರುವುದು ಜಗಕೆ ಮುಕ್ತಿಯಾ ಮನೆಕಡೆಗೆ
ದಾರಿ ತೋರುವುದು ಜಗಕೆ ಮುಕ್ತಿಯಾ ಮನೆಕಡೆಗೆ

Comments

Post a Comment

Popular posts from this blog

ಜೀವನ ಜಾತ್ರೆ

ನನ್ನ ಕಲ್ಪನೆ