ಜಾಗೋ ಭಾರತ್ ಜಾಗೋ

                           

     1960 ರೋಮ್  ಒಲಿಂಪಿಕ್ಸ್ ಭಾರತದ “ಪ್ಲೆಯಿಂಗ್ ಸಿಕ್” ಮೊದಲನೆಯವನಾಗಿ ಓಡುತ್ತಿದ್ದವ ಒಮ್ಮೆ ಹಿಂದಿರುಗಿ ನೋಡಿದ, ಅಷ್ಟರಲ್ಲಿ ಹಿಂದೆ ಉಳಿದ ಎಲ್ಲರೂ ಮುಂದೆ ಹೋಗಿಯಾಗಿತ್ತು. ಇದು “ಭಾಗ್ ಮಿಲ್ಕಾ ಭಾಗ್” ಚಿತ್ರದಲ್ಲಿ ಬರುವ ಮೊದಲ ಸೀನ್.ಈ ಸೀನ್ ನೋಡಿದಾಕ್ಷಣ ಕಂಡದ್ದು ಮಿಲ್ಕಾ ಸಿಂಗ್ ಅಲ್ಲ ಬದಲಾಗಿ ಭಾರತದ ಈಗಿನ ಪರಿಸ್ಥಿತಿ ಕಣ್ಣ ಮುಂದೆ ಹಾಗೇ ರೂಪುಗೊಳ್ಳಲು ಶರುವಾಯಿತು.

     ಭಾರತದ ಯುಕರಲ್ಲಿ ಶಕ್ತಿ ಇಲ್ಲವಾ? ಭಾರತದ ಜನರ ಸಂಸ್ಕೃತಿಗೆ ಅರ್ಥವಿಲ್ಲವಾ? ಭಾರತದ ಜನರು ಹೊದ್ದು ಮಲಗಿಕೊಳ್ಳಲು ಕಾರಣವಾದರೂ ಏನು? ಭಾರತೀಯರಾದ ನಾವು ಈ ಶೊಚನೀಯ ಪರಿಸ್ಥಿತಿಯಲ್ಲಿರಲು ಕಾರಣವಾದರು ಏನು? ನಿಜವಾಗಲು ಭಾರತದ ಪ್ರಸ್ತುತ ಸ್ತಿತಿಗೆ ಕಾರಣವಾದರು ಏನು? ನಾವು ಎಡವಿದ್ದೆಲ್ಲಿ? ಹೀಗೆ ಹತ್ತು ಹಲವು ಪ್ರಶ್ನೆಗಳು ಉದ್ಭವಿಸಿದವು.ಮಿಲ್ಕಾ ಸಿಂಗ್ ತನ್ನೆಲ್ಲಾ ಶಕ್ತಿಯನ್ನ ಮೀರಿ ಒಲಿಂಪಿಕ್ ಅಲ್ಲಿ ಸ್ಥಾನವನ್ನ ಗಿಟ್ಟಿಸಿಕೊಂಡಿದ್ದ, ಆತ ತನ್ನೆಲ್ಲಾ ಜೀವನವನ್ನ ಪಣವಾಗಿಟ್ಟು ತನ್ನೊಡನೆ ತಾನು ಹೋರಾಡಿ ಗೆದ್ದಿದ್ದಾ, ಆದರೂ ಆ ಹಳೆಯ ಕಹಿನೆನಪುಗಳಲ್ಲವೆ ಆತನ ದೃತಿಗೆಡಿಸಿದ್ದು? 

    ಭಾರತದ ಈಗಿನ ಸ್ಥಿತಿ ಇದಕ್ಕಿಂತ ಬೇರೆಯಾಗಿಲ್ಲ. ಸ್ವಾತಂತ್ರ್ಯ ಸಂಗ್ರಾಮ ಎಂಬ ಒಂದು ಮಹಾನ್ ಯುದ್ದದಲ್ಲಿ ಗೆದ್ದ ಜನ ಇನ್ನೂ ವಿಶ್ರಾಂತಿಯಿಂದ ಎದ್ದಿಲ್ಲ. ಭಾರತಕ್ಕೆ ಬೇಕಾಗಿರೋದು ಹಣಶಕ್ತಿಯಾಗಲಿ ಅಥವಾ ಇನ್ನಯಾವುದೇ ಶಕ್ತಿಯಲ್ಲ ಬದಲಾಗಿ ಒಂದು ಮಾರ್ಗದರ್ಶನದ ಶಕ್ತಿಯ ಅಗತ್ಯ ಭಾರತಕ್ಕಿದೆ.ಬೆಳವಣಿಗೆಯಲ್ಲಿ ಹಿನ್ನಡೆ,ಭಯೋತ್ಪಾದನೆ,ಆರ್ಥಿಕ ದುಸ್ತಿರತೆ ಇನ್ನೂ ಅನೇಕಾನೆಕ ಅಡೆತಡೆಗಳು ಭರತದ ಮುಂದಿದೆ. ಇವನೆಲ್ಲಾ ಭರತಿಯರು ದಾಟದಷ್ಟು ಶಕ್ತಿಹೀನರಲ್ಲ ಆದರೆ ಆ ದಾಟುವ ಬಗೆಹೇಗೆ ಮತ್ತು ಜನರನ್ನು ಜನರಿಗಾಗಿ ಹೇಗೆ ಬಳಸಿಕೊಳ್ಳಬೇಕು ಎಂಬ ಒಂದು ಮಾರ್ಗದರ್ಶನ ಶಕ್ತಿಯ ಅಗತ್ಯ ಭಾರತಕ್ಕಿದೆ.

     “The youths of this nation is not useless they are used less”  ನರೇಂದ್ರ ಮೋದಿಯವರ ಮಾತುಗಳಿವು. ಈ ಭಾರತದ ಯುಕರಲ್ಲಿ ಅಗಾಧವಾದ ಶಕ್ತಿಯಿದ. ಪ್ರತಿಯೊಬ್ಬ ಯುವಕನ ನರಗಳಲ್ಲೂ ಸಹ ಉತ್ಸಾಹ ವಿದ್ಯುತ್ತಿನಂತೆ ಹರಿದಾಡುತ್ತಿದೆ ಆದರೆ ಆ ಅಗಾದ ಶಕ್ತಿಯನ್ನ ಉಪಯೋಗಿಸಿಕೊಳ್ಳುವ ಬಗೆ ಭಾರತದವರಿಗೆ ಗೊತ್ತಿಲ್ಲ ಅಷ್ಟೆ. ಆದರೆ ಈ ವಿಷಯವನ್ನರಿತ ವಿದೇಶಗಳು ಭಾರತದ ಯವಕರ ಶಕ್ತಿ ಮತ್ತು ಜ್ಞಾನವನ್ನ ತಮ್ಮ ತಮ್ಮ ಬೆಳವಣಿಗೆಗಾಗಿ “ಬಹುರಾಷ್ಠ್ರೀಯ ಕಂಪನಿ” ಗಳು ಎಂಬ ಹೆಸರಿನಲ್ಲಿ ಬಳಸಿಕೊಳ್ಳುತ್ತಿವೆ. ಭಾರತದ ಅಡಿಪಾಯವಾಗಿರುವ ಸನಾತನ ಹಿಂದು ಧರ್ಮ ಪ್ರತಿಯೊಬ್ಬರು ಇನ್ನೊಬ್ಬರಿಗೆ ಬದುಕುವುದನ್ನೇ ಸಾರುತ್ತದೆ ಆದರೆ “ರೈತರೇ ಈ ದೇಶದ ಬೆನ್ನೆಲುಬು” ಎನ್ನುತ್ತಿದ್ದ ದೇಶದಲ್ಲಿ ರೈತ ಜನರು ಏಕಾಂಗಿಗಳಾಗಿವೆ. ಒಂದು ದೇಶದ ಕೈಗಾರಿಕೆ,ಟೆಕ್ನಾಲಜಿ,ವ್ಯಾಪಾರ,ಕೃಷಿ, ಎಲ್ಲವೂ ಒಂದಕ್ಕೊಂದು ಹೆಗಲು ಕೊಡುತ್ತಾ ಸಾಗಬೇಕು ಆದರೆ ಈಗಿನ ಪ್ರಸ್ತುತ ಭಾರತದಲ್ಲಿ ಟೆಕ್ನಿಕಲ್ ಶಿಕ್ಷಣ ಬಹುರಾಷ್ಠ್ರೀಯ ಕಂಪನಿಗಳಿಗೆ ಬೇಕಾದ ರೀತಿಯಲ್ಲಿ ನೆಡೆಯುತ್ತಿದೆ, ಕೈಗಾರಿಕೆಗಳು ನಮ್ಮ ದೇಶದ ಸಂಪತನ್ನೆ 95% ತಯಾರು ಮಾಡಿ ಇನ್ನುಳಿದೈದು ಪರ್ಸೆಂಟ್ಗ್ ಗೆ ಬೇರೆದೇಶಗಳಿಗೆ ಮಾರಿ ಮತ್ತೆ ಅದೇ ಪೂರ್ತಿಮಾಡಿದ ವಸ್ತುವನ್ನ ದುಪ್ಪಟ್ಟು ಬೆಲೆಗೆ ಅವರಿಂದಲೆ ತೆಗೆದುಕೊಳ್ಳುತ್ತಿದೆ.ಇನ್ನು ವ್ಯಾಪರ ಎನ್ನುವುದು ಗ್ಲೋಬಲೈಜ್ಙೆಷನ್ ಎಂಬ ಮುಖವಾಡ ಹಾಕಿಕೊಂಡು ವಿದೇಶಗಳು ಅದರ ಉಪಯೋಗ ಪಡೆಯುತ್ತಿವೆಯೇ ಹೊರತು ಅದರ ಸಹಾಯವೂ ರೈತರಿಗೆ ಸಿಗಲಸಾದ್ಯವಾಗಿದೆ. ಹೀಗೆ ಪರಸ್ಪರ ಬೇರೆ ಬೇರೆ ದಿಕ್ಕುಗಳಲ್ಲಿ ಸಾಗುತ್ತಿರು ಭಾರತವನ್ನ ಒಟ್ಟುಗೂಡಿಸಿ ಒಂದೇ ಪಥದಲ್ಲಿ ನೆಡೆಸುವ ಮಾರ್ಗದರ್ಶನ ಶಕ್ತಿಯ ಅಗತ್ಯವಿದೆ.ಈ ನಿಟ್ಟಿನಲ್ಲಿ “
ಜಾಗೋ ಭಾರತ್ ಜಾಗೋ” ಎಂದು ಎಚ್ಚರಿಸುವ ಶಕ್ತಿಯನ್ನ ಶ್ರೀ ನರೇಂದ್ರ ಮೋದಿಯವರಲ್ಲಿ ನಾವುಗಳು ಕಾಣಬಹುದು.
ಇದಕ್ಕೊಂದು ಉದಾಹರಣೆ ಎಂದರೆ. ಮೋದಿಯವರು ಶ್ರಿ ವಲ್ಲಬಾಭಾಯಿ ಪಟೇಲರ 120 ಅಡಿ ಉದ್ದದ ಒಂದು ಲೋಹದ ಪುತ್ತಳಿಯನ್ನ ಮಾಡುವ ಯೋಜನೆಯಲ್ಲಿದ್ದಾರೆ ಆ ಪೂರ್ತಿ ಮೂರ್ತಿಯ ಖರ್ಚು ವೆಚ್ಚವನ್ನ ಮೋದಿಯೊಬ್ಬರೇ ಒಟ್ಟು ಗೂಡಿಸುವ ಶಕ್ತಿ ಅವರಲ್ಲಿದೆ ಆದರೆ ಆತ ಭಾರತದೇಶದ ಪ್ರತಿಯೊಂದು ಹಳ್ಳಿಗಳ ಪ್ರತಿಯೊಬ್ಬ ರೈತನ ಮನೆಯಿಂದ  ಒಂದು ಚೂರು ಲೋಹವನ್ನ ಪಡೆದು ಆ ಒಟ್ಟು ಲೋಹದಿಂದ ಆ ಪುತ್ತಳಿಯನ್ನ ಮಾಡುವ ಯೋಜನೆಯನ್ನ ರೂಪಿಸಿದ್ದಾರೆ. ಆ ವ್ಯಕ್ತಿಯ ಚಿಂತನೆಗಳು ಸಣ್ಣ ಪುಟ್ಟದಲ್ಲ ಬಹುದೊಡ್ಡ ಚಿಂತನೆಗಳು ಅದರೆ ಆ ಚಿಂತನೆಗಳಿಗೆ ರೂಪ ಕೊಡಲು ಆತ ಎಲ್ಲರನ್ನು ಬಳಸಿಕೊಂಡು ಆ ಚಿಂತನೆಯ ಫಲವನ್ನು ಎಲ್ಲರಿಗೆ ಹಂಚುತ್ತಾರೆ ಇದು ಮೋದಿಯವರ ವಿಷೇಶತೆ. ಇದಕ್ಕೆ ನಾವುಗಳು ನಾಯಕತ್ವ ಎನ್ನುವುದು. ನಾಯಕತ್ವ ಎಂದರೆ ಒಬ್ಬನೇ ಎಲ್ಲವನ್ನೂ ಮಾಡುವುದಲ್ಲ, ಬದಲಾಗಿ ಎಲ್ಲರನ್ನ ಸೇರಿಸಿಕೊಂಡು ಎಲ್ಲವನ್ನ ಮಾಡುವ ಕೌಶಲ್ಯಕ್ಕೆ ನಾಯಕತ್ವವೆಂದು ಹೇಳುತ್ತೇವೆ.
    
ಕೈಗಾರಿಕೆ,ಟೆಕ್ನಾಲಜಿ,ವ್ಯಾಪಾರ,ಕೃಷಿ,ಭದ್ರತೆ ಇವೆಲ್ಲದರ ಉದ್ದಾರವನ್ನ ಕೇವಲ ಒಂದು ಗುಂಪಿನಿಂದಲೋ ಅಥವಾ  ಒಬ್ಬನಿಂದಲೋ ಮಾಡಲಾಗುವುದಿಲ್ಲ. ಅದಕ್ಕೆ,ಮೊದಲು ನಾವುಗಳು ಒಟ್ಟುಗೂಡುವ ಅವಶ್ಯಯಕಥೆಯಿದೆ. ಕೇವಲ ಒಂದು ಧರಣಿಗೋ ಅಥವಾ ಮೋಜಿಗೊ ಒಟ್ಟುಗೂಡುವುದಲ್ಲ ದೇಶವನ್ನ ಕಟ್ಟಲು ಒಟ್ಟುಗಡುವ ಅವಶ್ಯಕಥೆಯಿದೆ. ಅದಕ್ಕೆ ಮೋದಿಯವರ ಇಂಥಾ ಹಲವು ಚಿಂತನೆಗಳು ಕಾರ್ಯರೂಪಕ್ಕೆ ಬರುವ ಅವಶ್ಯಕಥೆಯಿದೆ.ಆಗ ಪಾಕಿಸ್ತಾನವಲ್ಲ ಜಗತ್ತಿನ ಮಹಾದೊಡ್ಡ ರಾಷ್ಠ್ರಗಳು ಎಂದು ಬೀಗುತ್ತಿರುವ ಎಲ್ಲಾದೇಶಗಳು ಭಾರತದ ಕಾಲುಬುಡಲ್ಲಿರುತ್ತವೆ ಕಾರಣ ಈ ದೇಶದ ಅಡಿಪಾಯ ಹಾಗು ಈ ದೇಶದ ಯುವಕರ ಶಕ್ತಿ.
   
ಭಾರತಕ್ಕೆ ಯಾವಾಗ ಒಂದು ಪ್ರಬುದ್ದ ನಾಯಕತ್ವ ದೊರೆತಿದೆಯೋ ಆಗೆಲ್ಲಾ ಭಾರತ ಜಗತ್ತಿಗೆ ತನ್ನ ಶಕ್ತಿ ಏನು ಎಂಬ ಅರಿವು ಮಾಡಿಕೊಟ್ಟಿದೆ. ಶ್ರೀ ವಾಜಪೇಯಿ ಅವರ ಕಾಲದಲ್ಲಿ ಭಾರತ ತನ್ನ ಶಸ್ತ್ರಾಸ್ತ್ರದ ಶಕ್ತಿಯನ್ನ ತೋರಿಸಿತು,ಅಬ್ದುಲ್ ಕಲಾಂರ ನಾಯಕತ್ವದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ತನ್ನ ಶಕ್ತಿಯನ್ನ ಜಗತ್ತಿಗೇ ಮನವರಿಕೆ ಮಾಡಿಕೊಟ್ಟಿತು,1965 ರಲ್ಲಿ ಯುದ್ದದ ಯೋಚನೆಯಲ್ಲಿ ಕೂಡ ಇರದ ಭಾರತ  ಶ್ರೀ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ದಿಟ್ಟ ನಾಯಕತ್ವದಲ್ಲಿ ನಮ್ಮನ್ನು ಕೆಣಕಿದರೆ ಏನಾಗುವುದು ಎಂಬುದನ್ನ,ಪಾಕಿಸ್ತಾನವನ್ನ ಹೀನಾಯವಾಗಿ ಸೋಲಿಸಿ ಈಡೀ ವಿಶ್ವಕ್ಕೆ ತನ್ನ ಶಕ್ತಿಯನ್ನ ಸಾರಿದೆ,ಶ್ರೀ ಮತಿ ಇಂದಿರಾ ಗಾಂಧಿಯವರ  ಶಿಸ್ತಿನ ನಾಯಕತ್ವದಲ್ಲಿ ಭಾರತ ಖೃಷಿ ಕ್ರಾಂತಿಯ ಮೂಲಕ ಭಾರತದ ರೈತರ ಮನೋಸ್ಥೈರ್ಯವನ್ನ ಜಗತ್ತಿಗೇ ತೋರಿಕೊಟ್ಟಿದೆ.ಹೀಗೆ ಭಾರತಕ್ಕೆ ಒಂದು ಪ್ರಬುದ್ದ ನಾಯಕತ್ವದೊರೆತಲ್ಲಿ ಅದು ಇಡೀ ವಿಶ್ವವನ್ನೆ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.ಈಗ ಮತ್ತೆ ಆ ನಾಯಕತ್ವವನ್ನ,ಭಾರತದ ಭವ್ಯ ಭವಿಷ್ಯವನ್ನ ನರೇಂದ್ರ ಮೋದಿಯವರಲ್ಲಿ ನಾವು ಕಾಣಬಹುದು.
   
         ನರೇಂದ್ರ ಮೋದಿಯಂತಹ ನಾಯಕರು ಪ್ರತಿಯೊಬ್ಬರಲ್ಲೂ ಇದ್ದಾರೆ, ಆತನ ಚಿಂತನೆಗಳಂತಹ ಚಿಂತನೆಗಳು ಕೂಡ ಪ್ರತಿಯೊಬ್ಬರಲ್ಲಿಯೂ ಇವೆ. ಗುಜರಾತಿನಲ್ಲಿ ಅದೇ ಹಳೆ ಕರೆಂಟ್ ಬೋರ್ಡ,ಅದೇ ಹಳೆ ನೌಕರರು, ಅದೇ ಹಳೆ ಲೈನುಗಳು ಆದರೆ ಮಾರ್ಗದರ್ಶನ ಮಾತ್ರ ಮೋದಿಯವರದ್ದು ಅದೇ ವ್ಯವಸ್ಥೆಯನ್ನ ಬದಲಾಯಿಸಿ 24 ಘಂಟೆ ಕರೆಂಟ್ ಸೌಲಭ್ಯವನ್ನ ಇಡೀ ಗುಜರಾತಿಗೇ ಮೋದಿಯವರು ಮಾಡಿಕೊಟ್ಟಿದ್ದಾರೆ. ಈಗಿನ ಪ್ರತಿಯೊಂದು ಸ್ಥಿತಿಯನ್ನ ಬದಲಾಯಿಸಬಹುದು ಕಾರಣ ಪರಿವರ್ತನೆ ಜಗದ ನಿಯಮ.ಭಾರತದಲ್ಲಿರುವ ಎಲ್ಲಾ ಯುವಕರು ಮನಸ್ಸು ಮಾಡಿದಲ್ಲಿ ಭಾರತ ಮತ್ತೆ ಜಗದ್ಗುರುವಾಗುವಲ್ಲಿ ಯಾವ ಅನುಮಾನವೂ ಇಲ್ಲ.ಎಚ್ಚರಗೊಳ್ಳಬೇಕಷ್ಟೆ.

Comments

Post a Comment

Popular posts from this blog

ಜೀವನ ಜಾತ್ರೆ

ನನ್ನ ಕಲ್ಪನೆ