ಡ್ರಾಮ ತದರಿನನ.........

"ಬೊಂಬೆಯಾಡ್ಸೋನು ಮ್ಯಾಲೆ ಕುಂತವ್ನೆ ನಮ್ಗೆ ನಿಮಗೆ ಯಾಕೆ ಟೆನ್ಸನ್ನು"

ನಮಸ್ಕಾರ ಗೆಳೆಯರೆ,ಮೇಲಿನ ಸಾಲು ನೊಡುತ್ತಿದ್ದಂತೆ ನಿಮಗೆ ಡ್ರಾಮ ಚಿತ್ರ ನೆನಪಾಗುತ್ತೆ ಅಲ್ವ.ಹೌದು ಗೆಳೆಯರೆ ನಾನು ಈ ಮೂಲಕ ಚಿತ್ರದ ಬಗ್ಗೆ ನನ್ನ ಅಭಿಪ್ರಾಯವನ್ನು ಹೇಳುವ ಒಂದು ಚಿಕ್ಕ ಪ್ರಯತ್ನವನ್ನ ಮಾಡುತ್ತಿದ್ದೇನೆ.

ಯೋಗರಾಜ್ ಭಟ್ರ "ಡ್ರಾಮ" ಚಿತ್ರ ಶುಕ್ರವಾರ ಬಿಡುಗಡೆ ಆಗಿತ್ತು.ಆಗಲೇ ಬಹು ನಿರೀಕ್ಷೆಯನ್ನು ಹೊತ್ತು ನಿಂತಂತಹ ಚಿತ್ರ ಅದು.
ಹಾಡುಗಳ ವಿಚಾರ,ಸಾರರಹಿತ ಚಿತ್ರ,ಬಿಟ್ಟಿ ಸಂಭಾಷಣೆ ಇಂತಹ ಹಲವಾರು ನಿಂದನೆಗಳು ಮತ್ತು ಅವರ ಚಿತ್ರಗಳನ್ನ ನೋಡಿ ಹಲವು ಪ್ರಶ್ನೆಗಳ ಉತ್ತರಕ್ಕೆ ಕಾಯುತ್ತಿದ್ದವರಿಗೆ ಈ ಚಿತ್ರವಾದರು ಉತ್ತರ ನೀಡಬಹುದೇ ಎಂದು ಕಾಯುತ್ತಿದ್ದೆ.ಆದರೆ ಭಟ್ರು ಒಂದು ಮಟ್ಟಿಗೆ ಎಲ್ಲಕ್ಕೂ ಉತ್ತರಿಸುವಲ್ಲಿ ಗೆದ್ದಿದ್ದಾರೆ.ಡ್ರಾಮ ಗೆದ್ದಿದೆ.

ಭಟ್ರು ಮತ್ತೊಮ್ಮೆ ನನಗೆ ಕಥೆಗಿಂತ ಪಾತ್ರಪೋಷಣೆಯೇ ಮುಖ್ಯ ಎಂಬುದನ್ನು ನಿರೂಪಿಸಿದ್ದಾರೆ.ಹೌದು ಭಟ್ರ ಎಲ್ಲಾ ಚಿತ್ರಗಳಲ್ಲೂ ಕಥೆಗಿಂತ ಪಾತ್ರ ಪೋಷಣೆಯೇ ಮುಖ್ಯವಾಗಿರುತ್ತೆ ಈ ಚಿತ್ರದಲ್ಲಿ ಬರುವಂತಹ ಪ್ರತಿಯೋಂದು ಪಾತ್ರಗಳಿಗೆ ಅದರದೇ ಆದಂತಹ ಅರ್ಧ ಮತ್ತು ಉದ್ದೇಶಗಳಿವೆ.ಭಟ್ರು ಪ್ರತಿಯೊಂದು ಪಾತ್ರಗಳಿಗೂ ಸಹ ನ್ಯಾಯ ಒದಗಿಸಿವಲ್ಲಿ ಗೆದ್ದಿದ್ದಾರೆ.
ಭಟ್ರ ಚಿತ್ರಗಳಲ್ಲಿ ಖುಷಿಯವಿಚಾರವೆಂದರೆ ಕಾಂಕ್ರೀಟ್ ಕಾಡಿನಿಂದ ದೂರ ಹೋಗಿ ಹಳ್ಳಿಗಳಲ್ಲಿ  ಚಿತ್ರಿಸುವ ಬಗೆ. ಹಳ್ಳಿಗಳ ಸೌಂದರ್ಯವನ್ನ ಕ್ಯಾಮರಾದಲ್ಲಿ ಸೆರೆ ಹಿಡಿಯುವ ಕುಶಲತೆ,ಹಳ್ಳಿ ಜನರ ಮುಗ್ದತೆಯನ್ನ,ಅವರ ಜೀವನವನ್ನ ತೆರೆಮೇಲೆ ಚಿತ್ರಿಸುವ ಬಗೆ ತುಂಬಾ ಖುಷಿಕೊಡುತ್ತೆ.

ಚಿತ್ರದ ಪಾತ್ರಗಳ ಬಗ್ಗೆ ಹೇಳಬೇಕಾದರೆ ಮೊಟ್ಟಮೊದಲನೆಯದಾಗಿ "ಅಂಬರೀಷ್" ಅವರಿಂದಲೇ ಶುರು ಮಾಡೋದೇ ಸರಿ. ಭಟ್ರ ಪ್ರತೀ ಚಿತ್ರದಲ್ಲೂ ಸಹ ಇಡೀ ಚಿತ್ರವನ್ನ,ನಿರ್ದೇಶಕನ ಚಿಂತನೆಯನ್ನ ಸಾರುವ ಒಂದು ಪಾತ್ರ ಇದ್ದೇಯಿರುತ್ತದೆ. ಆ ಪಾತ್ರವನ್ನ ಭಟ್ರು ಒಬ್ಬ ದೊಡ್ಡ ನಟನಿಗೆ ಕೊಡುವ ಸಂಪ್ರದಾಯವನ್ನ ಅಂಬರೀಷ್ ಅವರೊಂದಿಗೆ ಮುಂದುವರೆಸಿದ್ದಾರೆ.ಅಂಬರೀಷ್ ಅವರನ್ನ ತೋರಿಸಿರುವ ರೀತಿ ಮನಸಿಗೆ ಮುದನೀಡುವುದಲ್ಲದೇ ನಮ್ಮ ಬಾಳಿನ ಹಲವು ಪ್ರಶ್ನೆಗಳಿಗೆ ಆ ಪಾತ್ರದಿಂದ ಉತ್ತರ ನೀಡುವ ಪ್ರಯತ್ನ ಭಟ್ರು ಮಾಡಿದ್ದಾರೆ.ಮೊದಲಿನಿಂದ ಕೊನೆತನಕ ಕಧೆಯೊಂದಿಗೇ ಸಾಗುವ ಜ್ಯೋತಿಷ್ಯ ಹೇಳುವವನ(ಅಂಬರೀಷ್) ಪಾತ್ರ ತುಂಬಾ ಸೊಗಸಾಗಿ ಮೂಡಿ ಬಂದಿದೆ .

ಇನ್ನು ಯಶ್ ನಾಯಕನ ಪಾತ್ರವನ್ನ ಆತನ ಶಕ್ತಿ ಮೀರಿ ಮಾಡಿರುವುದು ಚಿತ್ರದಲ್ಲಿ ನೋಡಬಹುದು.ಆದರೂ ಒಂದೆರೆಡು ಕಡೆಗಳಲ್ಲಿ ಸಂಭಾಷಣೆ,ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಯಶ್ ಸ್ವಲ್ಪ ಎಡವಿದ್ದಾರೆ.ಹೊರತು ಪಡಿಸಿ ಪಾತ್ರಕ್ಕೆ ನ್ಯಾಯ ಒದಗಿಸುವಲ್ಲಿ  ಯಶ್ ಯಸ್ಸ್ವಿಯಾಗಿದ್ದಾರೆ.ನೀನಾಸಂ ಸತೀಶರ ಹಾಸ್ಯ ಚಿತ್ರಮಂದಿರದಲ್ಲಿ  ಚಪ್ಪಾಳೆ ಶಿಳ್ಳೆಗಿಟ್ಟಿಸುವಲ್ಲಿ ಯಶಸ್ಸನ್ನು ಕಂಡಿದೆ.ಮುದ್ದು ಮುಖದ ಚೆಲುವೆ ರಾಧಿಕಾ ಪಂಡಿತ್ ಅವರ ಗ್ಲಾಮರ್,ನಟನೆ ಎಲ್ಲವೂ ಚಿತ್ರದಲ್ಲಿ ಚೆನ್ನಾಗಿಯೇ ಕೆಲಸಮಾಡಿದೆ.ಸುಚೇಂದ್ರ ಪ್ರಸಾದರ ಕನ್ನಡದಲ್ಲೇ ಮಾತನಾಡುವ ಪಾತ್ರ  ಎಲ್ಲರೀಗೂ ಇಷ್ಟವಾಗುವ ಪಾತ್ರ.ಭಟ್ರು ನವೆಂಬರ್ ತಿಂಗಳ ಕನ್ನಡ ಪ್ರೀತಿಯನ್ನ ಸುಚೇಂದ್ರ ಪ್ರಸಾದರ ಮೂಲಕ ವ್ಯಕ್ತಪಡಿಸಿದ್ದಾರೆ.

ಜಗತ್ತು ಒಂದು ನಾಟಕ ರಂಗ ನಾವೆಲ್ಲರೂ ಪಾತ್ರಗಳು ಅವನು ಆಡಿಸಿದಂತೆ ನಾವು  ಆಡಬೇಕು ಎಂಬ ಷೇಕ್ಸ್ ಫಿಯರ್ ಅವರ ಮಾತಿನ ಮೇಲೆ ಒಂದು ಸುಂದರ ಚಿತ್ರವನ್ನ ಭಟ್ರು ಮಾಡಿದ್ದಾರೆ ಅಂತ ಅನ್ಸುತ್ತೆ.ಯಾರದೋ ಮಗಳಾದ ರಾಧಿಕಾ
 ಪಂಡಿತ್(ಪಾತ್ರ) ಚಿತ್ರದ ಕೋನೆಯಲ್ಲಿ ಇನ್ನ್ಯಾರಿಂದಲೋ ತಂದೆ ತಾಯಿಯ ಪ್ರೀತಿಯನ್ನ ಪಡೆಯುವುದು,ಯಾರೋ ಗೊತ್ತಿಲ್ಲದ ವೆಂಕಟೇಶ(ಯಶ್) ಸತೀಶ(ನೀನಾಸಂ ಸತೀಶ್) ಅವರುಗಳು ಯಾವುದೋ ಸಂಧರ್ಭಕ್ಕೆ ಸಿಲುಕಿ ಪಾರಾಗಲು ಮಾಡುವ ಕೆಲಸ ಹಳೆ ಸಂಭಂದವನ್ನ ಬೆಸೆಯುವಲ್ಲಿ ಕಾರಣವಾಗುತ್ತದೆ,ತನ್ನ ತಮ್ಮನನ್ನ(ಸತೀಶ) ಓದಿಸಲು ಕಷ್ಟಪಡುವ ಅಕ್ಕನ ಪಾತ್ರ ಪ್ರತಿಯೊಂದು ಚಿತ್ರದಲ್ಲಿ ಚೆನ್ನಾಗಿ ಮೂಡಿಬಂದಿದೆ.

ಇನ್ನು ಚಿತ್ರಮಂದಿರದಿಂದ ಹೋರನೆಡೆಯುವಾಗ ನಾವುಗಳು ಏನನ್ನು ತಗೆದುಕೋಂಡು ಹೋಗಬಹುದು ಎಂಬ ಪ್ರಶ್ನೆ.
ಚಿತ್ರದಲ್ಲಿ ಸತೀಶನ ಅಕ್ಕ ಕೋನೇಯಲ್ಲಿ "ಲೋ ಸತೀಶ ನೀನು ಹಾಕಿಕೊಂಡಿರುವ ಬಟ್ಟೆ,ಚಪ್ಪಲಿ,ತಿನ್ನೊ ಅನ್ನ ಯಾವುದೂ ನಿನ್ನದಲ್ಲ ಎಲ್ಲವೂ ಇನ್ನೊಬ್ಬರು ಹಾಕಿರುವ ಬಿಕ್ಷೆ" ಎಂದು ಹೇಳುತ್ತಾಳೆ.ಗೆಳೆಯರೆ ಈ ಮೂಲಕ ನಮಗೆ  ಪ್ರತಿಯೊಂದು
 ವಸ್ತು,ಅನ್ನ,ಬಟ್ಟೆ ಎಲ್ಲವೋ ನಮ್ಮದಲ್ಲ ಅದು ತಂದೆ ತಾಯಿ ಕೊಟ್ಟಂತಹದು.ಅದನ್ನು ನಾವು ಎಷ್ಟು ಬಳಸಬೇಕು ಎಂಬ ಬುದ್ದಿ ನಮಗಿರಬೇಕು ಬಿಟ್ಟಿ ಷೋಕಿ ಮಾಡುವುದು ಬೇಕಾ ಬಿಟ್ಟಿ ಖರ್ಚು ಮಾಡುವುದು ಎಲ್ಲವೂ ತಪ್ಪು.ಅಲ್ಲದೇ ಪ್ನರತಿಯಾಗಿ
ನಮಗೆ ಅವರು ಕೊಟ್ಟಿರುವ ಪ್ರೀತಿ,ಬೆಂಬಲ ಎಲ್ಲವಕ್ಕೂ ನಮ್ಮ ಕೈಯಲ್ಲಿ ಆದಷ್ಟು ಅವರ ಸೇವೆ ಮಾಡಬೇಕು.

ಈ ಚಿತ್ರ ಜೀವನದ ಡ್ರಾಮವನ್ನ ಮಾತ್ರ ಹೇಳ್ಳಿದ್ದರೆ ಯಶಸ್ಸು ಕಾಣುತ್ತಿತ್ತೂ ಇಲ್ಲವೂ ಈ ಚಿತ್ರದಲ್ಲೊಂದು ಚೆಂದವಾದ ಪ್ರೇಮ ಕಥೆಯಿದೆ.ರಾಧಿಕಾ ಪಂಡಿತ್,ಯಶ್ ನಡುವಿನ ಕೆಮಿಷ್ಟ್ಯಿ ತುಂಬಾ ಚೆನ್ನಾಗಿದೆ.ನೀನಾಸಂ ಸತೀಶ್ ಮತ್ತು ಇಡೀ ಚಿತ್ರದಲ್ಲಿ ಮಾತಾಡದ ಸಿಂಥು ಲೋಕನಾಥ್ ಅವರ ನಡುವಿನ ಪ್ರೀತಿ ಮನ್ನು ಕೋನೆಯಲ್ಲಿ ಆ ಪ್ರೇಮ ಕಥೆಯಿಂದ ಹೇಳುವ ನೀತಿ ಎಲ್ಲರ ಮನ ಮುಟ್ಟುತ್ತದೆ.

ಗೆಳೆಯರೆ ಪ್ರೀತಿ ಮಾಡೋದು ತಪ್ಪಲ್ಲ  ಆದರೆ ನಿಮ್ಮೊಂದಿಗೆ ಬರುವವಳನ್ನು ಖುಷಿಯಾಗಿಡಲು ನಿಮ್ಮಿಂದ ಸಾಧ್ಯವಾಗುವುದಾ ಎಂಬುದನ್ನು ಮೊದಲು ಯೋಚಿಸಿ.ಪ್ರೀತಿ ಮಾಡುವಾಗ ಎಲ್ಲಾ ಸುಂದರ  ಕಾರಣ ಆಗ ನಾವು ತಂದೆ ತಾಯಿಯ  ಆಶ್ರಯದಲ್ಲಿರುತ್ತೇವೆ ಮುದೊಂದುದಿನ ನಾವೇ ಬೇರೆಯವರಿಗೆ ಆಶ್ರಯ ನೀಡುವ ಕಾಲ ಬಂದಾಗ ಜೀವನವೆಂದರೇನು ಎಂಬುದುತಿಳಿಯುತ್ತದೆ.ಇಂತಹ ಎಷ್ಟೋ ವಿಷಯವನ್ನ ಡ್ರಾಮ ಯುವಜನತೆಗೆ ಹೇಳುವಲ್ಲಿ ಯಶಸ್ವಿಯಾಗಿದೆ.ಒಮ್ಮೆ ಈ ಚಿತ್ರ ನೋಡಿ ನಿಮ್ಮ ಜೀವನದ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಗಬಹುದು.

ಹಾಡಿನ ಸಾಹಿತ್ಯವನ್ನ ತಿರುಚಿ ಬರೆಯುವುದು ಈ ವಯಸ್ಸಿನ ಹಲವರು ಮಾಡುವಂತಹ ಕೆಲಸ ಹಂಗೇ ನಾವು ವಯಸ್ಸಿಗೆ ಮೋಸ ಮಾಡಬಾರದು ಅಂತ "ಚೆಂದುಟಿಯ ಪಕ್ಕದಲಿ" ಹಾಡಿನ ಮೊದಲೆರೆಡು ಸಾಲನ್ನು ನನ್ನ ಕಲ್ಪನೆಯಲಿ ಬರೆದಿರುವೆ
 

"ಕಲ್ಪನೆಯ ಕಣ್ಣಿನಲಿ ನಿನ್ನನ್ನೆ ಕಲ್ಪಿಸುವೆ
ಪ್ರೀತಿಸುವ ಬಗೆ ನಾನು ಅರಿಯೆ
ಮನಸಾರೆ ಪ್ರೀತಿಸುವೆ ಮನಸಾರೆ ಮುದ್ದಿಸುವೆ
ಮನಸಿನೊಳಗಿಳಿಯೇ ನೀ ಇಂದೆ
ನಿನ್ನನ್ನೆ ಪ್ರೀತಿಸುವೆ ಗೊತ್ತಿಲ್ವ
ಪ್ರೀತಿಯೇ ನೀನೆಂದು ತಿಳಿದಿಲ್ವ
ನೀನಿಲ್ದೆ ನಾನಿಲ್ಲ ಹೌದಲ್ವ  "

                           "ಓದಿದಕ್ಕೆ ಧನ್ಯವಾದಗಳು"

Comments

Popular posts from this blog

ಹಿಂದೂ ಧರ್ಮದ ದರ್ಶಿಕೆ "ಧರ್ಮ ಶ್ರೀ"

ಇದು ನನ್ನ ಜೀವನ

ಕನ್ನಡ ಮೀಡಿಯಮ್